ಪಕ್ಷದ ಮರುಸಂಘಟನೆಗಾಗಿ ಹಮ್ಮಿಕೊಂಡಿರೋ `ಭಾರತ್ ಜೋಡೋ' ಯಾತ್ರೆ ಸೆಪ್ಟೆಂಬರ್ 7ರಿಂದ ಪ್ರಾರಂಭವಾಗಲಿದೆ ಎಂದು ಕಾಂಗ್ರೆಸ್ ಘೋಷಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಸಾಗಲಿದೆ. ಭಾರತ್ ಜೋಡೋ 12 ರಾಜ್ಯಗಳಲ್ಲಿ ಸಾಗಲಿದ್ದು, ನಿತ್ಯ 25 ಕಿ.ಮೀನಂತೆ 3,500 ಕಿ.ಮೀ ದೂರ ಕ್ರಮಿಸಲಿದೆ. ಯಾತ್ರೆ ಮುಕ್ತಾಯವಾಗಲು 150 ದಿನಗಳು ಅಂದರೆ 5 ತಿಂಗಳು ಬೇಕಾಗಲಿದೆ ಅಂತ ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ. ಇತ್ತ ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ ಯಾತ್ರೆ ನಡೆಯಲು ಚಿಂತನೆ ನಡೆದಿದೆ ಎನ್ನಲಾಗ್ತಿದೆ. ರಾಹುಲ್‍ಗಾಂಧಿ ಜೊತೆಗೆ ರಾಜ್ಯದ ಎಲ್ಲಾ ನಾಯಕರು ಭಾಗಿಯಾಗಲಿದ್ದಾರಂತೆ. ಕ್ವಿಟ್ ಇಂಡಿಯಾ ಯಶಸ್ಸಿನಂತೆ `ಭಾರತ ಜೋಡಿಸಿ' ಯಾತ್ರೆ ಕೂಡ ಯಶಸ್ವಿಯಾಗುತ್ತೆ ಅಂತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#publictv #newscafe #hrranganath